ನೀನಾದೆ ನಾ ಪ್ರಸ್ತುತ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಸೋಮವಾರದಿಂದ ಶನಿವಾರದವರೆಗೆ ರಾತ್ರಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯು 2023ರ ಮೇ 16ರಿಂದ 30 ಆಗಸ್ಟ್ 2024ರವರೆಗೆ ಪ್ರಸಾರವಾಯಿತು . ಈ ಕಾರ್ಯಕ್ರಮವು ಬಂಗಾಳಿ ಭಾಷೆಯ ಖೇಲಘೋರ್ ಧಾರಾವಾಹಿಯ ಅಧಿಕೃತ ರೀಮೆಕ್ ಆಗಿದೆ. ಈ ಧಾರಾವಾಹಿಯಲ್ಲಿ ದಿಲೀಪ ಶೆಟ್ಟಿ ಮತ್ತು ಖುಷಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ . == ಕಥಾ ಹಂದರ == ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಕಥಾ ನಾಯಕಿ 'ವೇದಾ ಸತ್ಯಮೂರ್ತಿ' ಸಂಸ್ಕಾರ-ಸಂಸ್ಕೃತಿ, ಆಚಾರ-ವಿಚಾರಗಳನ್ನು ಪರಿಪಾಲಿಸುವಲ್ಲಿ ಸದಾ ಮುಂದೆ ಇರುತ್ತಾಳೆ. 'ವೇದಾ' ನೇರ ನಡೆಯನ್ನು ಹೊಂದಿರುತ್ತಾಳೆ. ಕಥಾ ನಾಯಕ 'ವಿಕ್ರಮ' ಗುಂಡಾಗಿರಿ ಮಾಡಿಕೊಂಡು, ತನ್ನ ಬಾಸ್ ಹೇಳಿದನ್ನು ಚಾಚು ತಪ್ಪದೆ ಎಲ್ಲ ಕೆಲಸ ಮಾಡುತ್ತಾನೆ. ಅದೇ ವಿಕ್ರಮನಿಗೆ ಆಚಾರ-ವಿಚಾರಗಳ ಬಗ್ಗೆ ಆಸಕ್ತಿ ಇಲ್ಲ. ಪದವಿ ಪಡೆದಿದ್ದರೂ ಕೂಡ ರೌಡಿ ತರ ಗೂಂಡಾಗಿರಿ ಮಾಡುತ್ತಾ ಊರು ಸುತ್ತುತ್ತಾ ಇರುತ್ತಾನೆ. ಈತನ ಅಪ್ಪನಿಗೂ ಇವನ ಮೇಲೆ ಕೋಪವಿರುತ್ತೆ. ವೇದಾಳಿಗೆ ಮನೆಯವರ ಸಮ್ಮುಖದಲ್ಲಿ, ಹುಟ್ಟಿ ಬೆಳೆದ ಊರಲ್ಲಿ, ಮನೆಯವರು ನೋಡಿದ ಹುಡುಗನೊಂದಿಗೆ ಮದುವೆಯಾಗಬೇಕು ಎಂಬ ಆಸೆ ಇರುತ್ತೆ. ಆದರೆ, ಕಥಾ ನಾಯಕ ವಿಕ್ರಮ್ ಒಂದು ದಿನ ದೇವರ ಸನ್ನಿಧಾನದಲ್ಲಿ ವೇದಾಳಿಗೆ ತಾಳಿ ಕಟ್ಟುತ್ತಾನೆ. ವೇದಾ ಮತ್ತು ವಿಕ್ರಮ ಇಬ್ಬರು ಗುಣದಲ್ಲಿ ತದ್ವಿರುದ್ಧ. ಇವರ ಮನಸ್ಸುಗಳು ಹೇಗೆ ಒಂದಾಗುತ್ತದೆ ಎಂಬುವುದೇ ಧಾರಾವಾಹಿಯ ಕಥಾ ಹಂದರವಾಗಿದೆ. == ಪಾತ್ರವರ್ಗ == === ಮುಖ್ಯಪಾತ್ರಗಳು === ದಿಲೀಪ್ ಶೆಟ್ಟಿ: ವಿಕ್ರಮ ಪಾತ್ರದಲ್ಲಿ, ಕಥಾ ನಾಯಕನಾಗಿ. ವೇದಾ ಗಂಡನಾಗಿ. ಖುಷಿ ಶಿವು: ವೇದಾ ಪಾತ್ರದಲ್ಲಿ, ಕಥಾ ನಾಯಕಿಯಾಗಿ. ವಿಕ್ರಮ್ ಹೆಂಡತಿಯಾಗಿ. === ಇತರೆ ಪಾತ್ರಗಳು === ಸ್ವಾತಿ: ಜಯಲಕ್ಷ್ಮೀ ಪಾತ್ರದಲ್ಲಿ. ಜಗನ್ನಾಥ್ ಹೆಂಡತಿಯಾಗಿ, ವಿಷ್ಣು, ವೆಂಕಿ ಮತ್ತು ವಿಕ್ರಮ್ ತಾಯಿಯಾಗಿ. ನಾಗೇಶ್ ಯಾದವ್: ಜಗನ್ನಾಥ್ ಪಾತ್ರದಲ್ಲಿ. ವಿಷ್ಣು, ವೆಂಕಿ ಮತ್ತು ವಿಕ್ರಮ್ ತಂದೆಯಾಗಿ. ಭವ್ಯಶ್ರೀ ಪೂಜಾರಿ: ಶೈಲೂ ಪಾತ್ರದಲ್ಲಿ, ವೆಂಕಿ ಹೆಂಡತಿಯಾಗಿ. ವಿನಾಯಕ್ ಜೋಶಿ: ವೆಂಕಿ ಪಾತ್ರದಲ್ಲಿ, ಶೈಲೂ ಗಂಡನಾಗಿ. ವಿಕ್ರಮ್ ಎರಡನೇ ಅಣ್ಣನಾಗಿ. ಅನಿಕಾ ಸಿಂಧ್ಯಾ: ಚೈತ್ರ ಪಾತ್ರದಲ್ಲಿ, ವೇದಾ ಅತ್ತಿಗೆಯಾಗಿ. ವಿಶಾಲ್ ಭಾರಾಧ್ವಾಜ್: ಲೋಕೆಶ್ ಪಾತ್ರದಲ್ಲಿ, ವೇದಾ ಅಣ್ಣನಾಗಿ. ಜ್ಯೋತಿ ಬಂಟ್ವಾಳ್: ಅಂಬುಜಾ ಪಾತ್ರದಲ್ಲಿ, ವೇದಾ ಮತ್ತು ಲೋಕೆಶ್ ತಾಯಿಯಾಗಿ. == ರೂಪಾಂತರಗಳು == == ಉಲ್ಲೇಖಗಳು ==